ಅದೇಕೋ ಇಂದು ನನ್ನಿನಿಯ
ತುಂಬಾ ಖುಷಿಯಾಗಿದ್ದ
ಕಾರಣ ಕೇಳಿದರೆ,ಅದನ್ನ
ಬಿಡು ಹತ್ತಿರ ಬಾ ಎಂದಿದ್ದ ....
ಎಂದೂ ಇಲ್ಲದ ಪ್ರೀತಿ
ಇಂದೇಕೆ ಎಂದು ಆಶ್ಚರ್ಯವಾಗಿತ್ತು
ಎಲ್ಲಾ ಚಿಂತೆಯನ್ನು ಬಿಟ್ಟು
ಅವನ ಅಪ್ಪುಗೆಯಲ್ಲಿ ಕರಗುವಂತಾಗಿತ್ತು ....
ನನ್ನವನ ತುಟಿಯಂಚಿನಿಂದ
ಬಂದ ಮುತ್ತು ಕೆನ್ನೆ ಸೇರಿತ್ತು
ನಾ ತಿರುಗುವ ಮೊದಲೇ ಅವನ
ಕೆನ್ನೆ ನನ್ನ ತುಟಿಯ ಹತ್ತಿರ ಇತ್ತು ....