Tuesday, June 14, 2011

ಜಾತ್ರೆಯಲ್ಲಿ ಮಳೆರಾಯನೊಂದಿಗೆ

ತುಂತುರು ಹನಿಯೊಂದಿಗೆ ಬೀಳುತ್ತಿತ್ತು ಮಳೆಯು
ಜಾತ್ರೆಯ ಸಮಯದಿ ಆಗುತ್ತಿತ್ತು ಖುಷಿ-ಖುಷಿಯು
ಅದರಲ್ಲೇ ನಲಿದಾಡಿತು ನಮ್ಮೆಲ್ಲರ ಮನವು .....

ಮಳೆರಾಯನ ಆಗಮನವು ಆಯ್ತು ದೇವಿಯ ಎದುರು
ಅದರೊಂದಿಗೆ ಆಯ್ತು ನಮ್ಮೆಲ್ಲರ ಮುಖದಲ್ಲಿ  ಗಾಬರಿಯು
ಆದರೂ ತಿರುಗಿದೆವು ಹೆದರದೇ ಜಾತ್ರೆಯ ಸಮಯದಲ್ಲಿ .....

ಕೈ-ಕೈ ಹಿಡಿದು ಸಾಗಿದೆವು ಅದೇ ಕೆಸರು ಗುಂಡಿಯಲ್ಲಿ
ಎಲ್ಲ ಆಟಿಕೆಗಳ ಹತ್ತಿದೆವು ಆ ಮಳೆಯಲ್ಲಿ
ತಿರುಗಿ ಬಂದು ನೋಡಿದರೆ ನಮ್ಮಯ ಪರ್ಸೆಲ್ಲಾ ಖಾಲಿ-ಖಾಲಿ.....



Wednesday, April 27, 2011

ಬಾನಂಗಳದಲ್ಲಿ ಒಮ್ಮೆ........

ಬಾನಂಗಳದಲ್ಲಿ ಒಮ್ಮೆ  ಇಣುಕಿದರೆ
ಕಾಣುವನು ಚಂದಿರನು
ತನ್ನೊಂದಿಗೆ ಆಗಸದಲ್ಲಿ ತಾರೆಗಳ
ಚಿತ್ತಾರ ಬರೆದಿರುವನು......

                  
ಆ ನೀಲಿ ಆಗಸದಲ್ಲಿ ರಾಜನಂತೆ
ನಿಂತಿರುವೆ,ತಾರೆಯರೆಲ್ಲ
ಸೇವಕರಂತೆ ನಿನ್ನನ್ನು
ಸದಾ ಸುತ್ತಿರುವರು......


ಹಗಲಿನಲ್ಲಿ ಸೂರ್ಯನೊಂದಿಗೆ
ನೀ ಕಾಣೆಯಾಗುವೆ,ರಾತ್ರಿಯಲ್ಲಿ
ನಕ್ಷತ್ರ ಮಂಡಲದೊಂದಿಗೆ
ಸದಾ ಬೆಳಕು ನೀಡುವೆ ......


ಹೇ ಬಾನಚಂದಿರನೆ
ಹೇಗೆ ವರ್ಣಿಸಬಹುದು ನಿನ್ನ
ಹಾಲ್ಬಿಳುಪು ಬಣ್ಣವ ಹೊದ್ದಿರುವ
ನೀನು ಕಲಾಸಾಗರನಾಗಿರುವೆ .......

Wednesday, March 9, 2011

ಜೀವನ.........

ಬಾಳೆಂಬ ಸಾಗರದಲ್ಲಿ
ಅಲೆಗಳೆಂಬ ತೊಂದರೆಗಳು ....
ಇದು ಅರಿತು ನಡೆದರೆ ಸಿಹಿ
ಇದು ಮರೆತು ನಡೆದರೆ ಕಹಿ .....

                                     ಈ ಸಾಗರದಲ್ಲಿ ನಾವೆಲ್ಲಾ ದೋಣಿಗಳು
                                      ಆ ದೇವನೇ ಅಂಬಿಗನು ....
                                      ಅವನು ಹಾಕಿದ ಹುಟ್ಟಿಗೆ
                                     ನಾವು ಸಾಗಲೇ ಬೇಕು ......

ಜೀವನವೆಂಬ ನಾಟಕದಲ್ಲಿ
ನಾವೆಲ್ಲಾ ಪಾತ್ರಧಾರಿಗಳು .....
ಆ ದೇವನೇ  ಸೂತ್ರಧಾರಿ
 ಅವನಾಡಿಸಿದ ಆಟ ಆಡಲೇ ಬೇಕು ......

                                              ಈ ನಾಟಕದಲ್ಲಿ ಬದುಕೆಂಬುದೆ ಆಟ
                                               ಇಲ್ಲಿ ಮಾನವರೇ ಆಟದ ವಸ್ತು .....
                                               ಕರುಣೆಯೆಂಬ ಶಬ್ಧವೇ ಇಲ್ಲ
                                               ಈ ನಮ್ಮ ಜೀವನದ ನಾಟಕದಲ್ಲಿ .......