Thursday, February 9, 2012

ಭಾರತ ಮಾತೆ....

ಹೇ ಭಾರತ ಮಾತೆ
ವಂದಿಸುವೆನು ಭಕ್ತಿಯಿಂದ
ಕರವ ಮುಗಿದು ಶಿರವ ಬಾಗಿಸಿ
ನಿನ್ನ ಚರಣಕೆರಗುವೆ ....
           
                                ಜಾತಿ ಮತವ ತೊರೆದು
                                ನಿನ್ನೆಡೆಗೆ ಸೇರಿಸಿದೆ
                                 ಭೇದ - ಭಾವವ ತೊರೆದು ಒಂದಾಗಿಸಿದೆ ....

ಎಲ್ಲರು ಒಂದೇ ಜಾತಿ ಮತದವರೆಂದು
ನಂಬಿಕೆಯಿಟ್ಟು ನಿನ್ನೆಡೆಗೆ
ಪ್ರೀತಿಯಿಂದ ಬರಮಾಡಿಕೊಂಡೆ ....

                                  ಜಗಕೆ ಹೇಗೆ ಹೇಳಲಿ
                                  ನಿನ್ನ ಗುಣದ ಬಗ್ಗೆ
                                  ನಮ್ಮೆಲ್ಲರ ಭಾರತ ಮಾತೆ
                                   ನಿನಗೆ ಮತ್ತೊಮ್ಮೆ ನನ್ನ ವಂದನೆ .....                                    
                                      

Tuesday, June 14, 2011

ಜಾತ್ರೆಯಲ್ಲಿ ಮಳೆರಾಯನೊಂದಿಗೆ

ತುಂತುರು ಹನಿಯೊಂದಿಗೆ ಬೀಳುತ್ತಿತ್ತು ಮಳೆಯು
ಜಾತ್ರೆಯ ಸಮಯದಿ ಆಗುತ್ತಿತ್ತು ಖುಷಿ-ಖುಷಿಯು
ಅದರಲ್ಲೇ ನಲಿದಾಡಿತು ನಮ್ಮೆಲ್ಲರ ಮನವು .....

ಮಳೆರಾಯನ ಆಗಮನವು ಆಯ್ತು ದೇವಿಯ ಎದುರು
ಅದರೊಂದಿಗೆ ಆಯ್ತು ನಮ್ಮೆಲ್ಲರ ಮುಖದಲ್ಲಿ  ಗಾಬರಿಯು
ಆದರೂ ತಿರುಗಿದೆವು ಹೆದರದೇ ಜಾತ್ರೆಯ ಸಮಯದಲ್ಲಿ .....

ಕೈ-ಕೈ ಹಿಡಿದು ಸಾಗಿದೆವು ಅದೇ ಕೆಸರು ಗುಂಡಿಯಲ್ಲಿ
ಎಲ್ಲ ಆಟಿಕೆಗಳ ಹತ್ತಿದೆವು ಆ ಮಳೆಯಲ್ಲಿ
ತಿರುಗಿ ಬಂದು ನೋಡಿದರೆ ನಮ್ಮಯ ಪರ್ಸೆಲ್ಲಾ ಖಾಲಿ-ಖಾಲಿ.....



Wednesday, April 27, 2011

ಬಾನಂಗಳದಲ್ಲಿ ಒಮ್ಮೆ........

ಬಾನಂಗಳದಲ್ಲಿ ಒಮ್ಮೆ  ಇಣುಕಿದರೆ
ಕಾಣುವನು ಚಂದಿರನು
ತನ್ನೊಂದಿಗೆ ಆಗಸದಲ್ಲಿ ತಾರೆಗಳ
ಚಿತ್ತಾರ ಬರೆದಿರುವನು......

                  
ಆ ನೀಲಿ ಆಗಸದಲ್ಲಿ ರಾಜನಂತೆ
ನಿಂತಿರುವೆ,ತಾರೆಯರೆಲ್ಲ
ಸೇವಕರಂತೆ ನಿನ್ನನ್ನು
ಸದಾ ಸುತ್ತಿರುವರು......


ಹಗಲಿನಲ್ಲಿ ಸೂರ್ಯನೊಂದಿಗೆ
ನೀ ಕಾಣೆಯಾಗುವೆ,ರಾತ್ರಿಯಲ್ಲಿ
ನಕ್ಷತ್ರ ಮಂಡಲದೊಂದಿಗೆ
ಸದಾ ಬೆಳಕು ನೀಡುವೆ ......


ಹೇ ಬಾನಚಂದಿರನೆ
ಹೇಗೆ ವರ್ಣಿಸಬಹುದು ನಿನ್ನ
ಹಾಲ್ಬಿಳುಪು ಬಣ್ಣವ ಹೊದ್ದಿರುವ
ನೀನು ಕಲಾಸಾಗರನಾಗಿರುವೆ .......

Wednesday, March 9, 2011

ಜೀವನ.........

ಬಾಳೆಂಬ ಸಾಗರದಲ್ಲಿ
ಅಲೆಗಳೆಂಬ ತೊಂದರೆಗಳು ....
ಇದು ಅರಿತು ನಡೆದರೆ ಸಿಹಿ
ಇದು ಮರೆತು ನಡೆದರೆ ಕಹಿ .....

                                     ಈ ಸಾಗರದಲ್ಲಿ ನಾವೆಲ್ಲಾ ದೋಣಿಗಳು
                                      ಆ ದೇವನೇ ಅಂಬಿಗನು ....
                                      ಅವನು ಹಾಕಿದ ಹುಟ್ಟಿಗೆ
                                     ನಾವು ಸಾಗಲೇ ಬೇಕು ......

ಜೀವನವೆಂಬ ನಾಟಕದಲ್ಲಿ
ನಾವೆಲ್ಲಾ ಪಾತ್ರಧಾರಿಗಳು .....
ಆ ದೇವನೇ  ಸೂತ್ರಧಾರಿ
 ಅವನಾಡಿಸಿದ ಆಟ ಆಡಲೇ ಬೇಕು ......

                                              ಈ ನಾಟಕದಲ್ಲಿ ಬದುಕೆಂಬುದೆ ಆಟ
                                               ಇಲ್ಲಿ ಮಾನವರೇ ಆಟದ ವಸ್ತು .....
                                               ಕರುಣೆಯೆಂಬ ಶಬ್ಧವೇ ಇಲ್ಲ
                                               ಈ ನಮ್ಮ ಜೀವನದ ನಾಟಕದಲ್ಲಿ .......  

Thursday, December 30, 2010

ಜಗ ಹೊತ್ತಿ ಉರಿದೊಡೆ......

ಧಗ ಧಗನೆ ಹೊತ್ತಿ ಉರಿಯುವ
ಈ ನಾಡಿನಲ್ಲಿ ,ಆ ಬೆಂಕಿಯ
ಆರಿಸುವವರು ಯಾರಿಹರು ಇಲ್ಲಿ......

ಒಂದೆಡೆ ಭಯೋತ್ಪಾದನೆ ..
ಇನ್ನೊಂದೆಡೆ ರಾಜಕೀಯ ..
ಇವೆರಡರ ನಡುವೆ ಇರುವ
ನಮ್ಮ ದೇಶವ ರಕ್ಷಿಸುವರ್ಯಾರು ........

ಕೊಲೆ-ಸುಲಿಗೆ-ವಂಚನೆ
ಅತ್ಯಾಚಾರ-ಅನಾಚಾರ
ಇವೆಲ್ಲದರ ನಡುವೆ ಇರುವ
ಜನರಿಗೆ ಸ್ಥಾನವೆಲ್ಲಿದೆ ......?

ಜನತೆಯಂತೆ ಕಾಡು ಪ್ರಾಣಿಗಳಿಗೂ
ಸಹ ಜಾಗವಿಲ್ಲದಂತಾಗಿದೆ
ಇಡೀ ಜಗವೇ ದುಷ್ಟರಿಂದ ಕೂಡಿದೆ
ಇದರ ರಕ್ಷಣೆ ಯಾರದ್ದಾಗಿದೆ .......?

ಗ್ರಾಮ- ಗ್ರಾಮವೇ ಹೊತ್ತಿ ಉರಿದರೂ
ಅದರ ಗೊಡವೆಯೇ ಬೇಡ ಎಂದು
ಸುಮ್ಮನೆ ಇರುವ ಜನಗಳೇ,ಏಳಿ
ಎದ್ದೇಳಿ ನಮ್ಮ ದೇಶವ ರಕ್ಷಿಸೋಣ ........

Monday, November 22, 2010

ಇನಿಯ.........

ಅದೇಕೋ ಇಂದು ನನ್ನಿನಿಯ
ತುಂಬಾ ಖುಷಿಯಾಗಿದ್ದ
ಕಾರಣ ಕೇಳಿದರೆ,ಅದನ್ನ
ಬಿಡು ಹತ್ತಿರ ಬಾ ಎಂದಿದ್ದ ....

                                      ಎಂದೂ ಇಲ್ಲದ ಪ್ರೀತಿ
                                       ಇಂದೇಕೆ ಎಂದು ಆಶ್ಚರ್ಯವಾಗಿತ್ತು
                                      ಎಲ್ಲಾ ಚಿಂತೆಯನ್ನು ಬಿಟ್ಟು
                                     ಅವನ  ಅಪ್ಪುಗೆಯಲ್ಲಿ ಕರಗುವಂತಾಗಿತ್ತು ....


ನನ್ನವನ ತುಟಿಯಂಚಿನಿಂದ
ಬಂದ ಮುತ್ತು ಕೆನ್ನೆ ಸೇರಿತ್ತು
ನಾ ತಿರುಗುವ ಮೊದಲೇ ಅವನ
ಕೆನ್ನೆ ನನ್ನ ತುಟಿಯ ಹತ್ತಿರ ಇತ್ತು ....

Friday, October 8, 2010

ಸೂರ್ಯದೇವನ ಕಣ್ಣಾಮುಚ್ಚಾಲೆ ....


ಬಾನಂಗಳದಲ್ಲಿ ಮೂಡುತ್ತಿರುವ
ಹೇ  ಸೂರ್ಯದೇವನೇ
ನಿನ್ನ ಕಿರಣಗಳಿಂದ ನಾ
ಕಣ್ಣು ತೆರೆಯದಾದೆ ........
                              

                              ಉದಯ ಕಾಲದ ಕೆಂಪು ವರ್ಣವ
                              ಕಾಣದವರು ಯಾರು ಇಲ್ಲ
                              ನೋಡು -ನೋಡುತ್ತಿದ್ದಂತೆ
                              ನಭದ ಮೇಲೆರುವೆಯಲ್ಲ ......


ಹೊತ್ತು ಏರುವ ಹಾಗೆ ಎಲ್ಲರ
ನೆತ್ತಿಯ  ಸುಡುವೆಯಲ್ಲ
ತಂಪ ಪಡೆಯಲು ನೆರಳಿಗೆ
ಅತ್ತ-ಇತ್ತ ಸಾಗುವರೆಲ್ಲ .......
.
                             
                              ಮುಸ್ಸಂಜೆಯ  ಹೊತ್ತಿನಲ್ಲಿ
                              ನೀ ಮುಳುಗುವುದ ನೋಡಲು
                              ಸಾಗರದೆಡೆಗೆ ಜನರು ಸಾಗುವರು
                              ಆ ನಿನ್ನ ಸೌಂದರ್ಯವ ನೋಡಿ ಸಂತೋಷಿಸುವರು........


ದಿನವೂ ಪೂರ್ವದಲ್ಲೊಮ್ಮೆ ಹುಟ್ಟಿ
ಪಶ್ಚಿಮದಲ್ಲಿ ನೀ ಮುಳುಗುವೆ
ಎಂತಹದು ಈ ನಿನ್ನ ಪರಿಯು
ನಿನಗಿದೋ ಸಮಸ್ತ ಜನತೆಯ ಪ್ರಣಾಮಗಳು .........