
ಬಾನಂಗಳದಲ್ಲಿ ಮೂಡುತ್ತಿರುವ
ಹೇ ಸೂರ್ಯದೇವನೇ
ನಿನ್ನ ಕಿರಣಗಳಿಂದ ನಾ
ಕಣ್ಣು ತೆರೆಯದಾದೆ ........

ಉದಯ ಕಾಲದ ಕೆಂಪು ವರ್ಣವ
ಕಾಣದವರು ಯಾರು ಇಲ್ಲ
ನೋಡು -ನೋಡುತ್ತಿದ್ದಂತೆ
ನಭದ ಮೇಲೆರುವೆಯಲ್ಲ ......

ಹೊತ್ತು ಏರುವ ಹಾಗೆ ಎಲ್ಲರ
ನೆತ್ತಿಯ ಸುಡುವೆಯಲ್ಲ
ತಂಪ ಪಡೆಯಲು ನೆರಳಿಗೆ
ಅತ್ತ-ಇತ್ತ ಸಾಗುವರೆಲ್ಲ .......
.

ಮುಸ್ಸಂಜೆಯ ಹೊತ್ತಿನಲ್ಲಿ
ನೀ ಮುಳುಗುವುದ ನೋಡಲು
ಸಾಗರದೆಡೆಗೆ ಜನರು ಸಾಗುವರು
ಆ ನಿನ್ನ ಸೌಂದರ್ಯವ ನೋಡಿ ಸಂತೋಷಿಸುವರು........

ದಿನವೂ ಪೂರ್ವದಲ್ಲೊಮ್ಮೆ ಹುಟ್ಟಿ
ಪಶ್ಚಿಮದಲ್ಲಿ ನೀ ಮುಳುಗುವೆ
ಎಂತಹದು ಈ ನಿನ್ನ ಪರಿಯು
ನಿನಗಿದೋ ಸಮಸ್ತ ಜನತೆಯ ಪ್ರಣಾಮಗಳು .........
very Nice composing Rashmi
ReplyDeleteಚಂದದ ಕವನಕ್ಕೆ ಅಭಿನಂದನೆಗಳು !!
ReplyDeleteKeep blogging!
ವಾಹ್!ತು೦ಬಾ ಸು೦ದರ ಕವನ.ಬೆಳಗಿನಿ೦ದ ಸ೦ಜೆಯವರೆಗಿನ ಸೂರ್ಯನ ಸೊಬಗನ್ನು ಕವಿತೆಯಲ್ಲಿ ಚೆನ್ನಾಗಿ ಹೆಣೆದಿದ್ದೀರಿ. ಚಿತ್ರಗಳೂ ಸು೦ದರವಾಗಿವೆ.
ReplyDelete