Thursday, December 30, 2010

ಜಗ ಹೊತ್ತಿ ಉರಿದೊಡೆ......

ಧಗ ಧಗನೆ ಹೊತ್ತಿ ಉರಿಯುವ
ಈ ನಾಡಿನಲ್ಲಿ ,ಆ ಬೆಂಕಿಯ
ಆರಿಸುವವರು ಯಾರಿಹರು ಇಲ್ಲಿ......

ಒಂದೆಡೆ ಭಯೋತ್ಪಾದನೆ ..
ಇನ್ನೊಂದೆಡೆ ರಾಜಕೀಯ ..
ಇವೆರಡರ ನಡುವೆ ಇರುವ
ನಮ್ಮ ದೇಶವ ರಕ್ಷಿಸುವರ್ಯಾರು ........

ಕೊಲೆ-ಸುಲಿಗೆ-ವಂಚನೆ
ಅತ್ಯಾಚಾರ-ಅನಾಚಾರ
ಇವೆಲ್ಲದರ ನಡುವೆ ಇರುವ
ಜನರಿಗೆ ಸ್ಥಾನವೆಲ್ಲಿದೆ ......?

ಜನತೆಯಂತೆ ಕಾಡು ಪ್ರಾಣಿಗಳಿಗೂ
ಸಹ ಜಾಗವಿಲ್ಲದಂತಾಗಿದೆ
ಇಡೀ ಜಗವೇ ದುಷ್ಟರಿಂದ ಕೂಡಿದೆ
ಇದರ ರಕ್ಷಣೆ ಯಾರದ್ದಾಗಿದೆ .......?

ಗ್ರಾಮ- ಗ್ರಾಮವೇ ಹೊತ್ತಿ ಉರಿದರೂ
ಅದರ ಗೊಡವೆಯೇ ಬೇಡ ಎಂದು
ಸುಮ್ಮನೆ ಇರುವ ಜನಗಳೇ,ಏಳಿ
ಎದ್ದೇಳಿ ನಮ್ಮ ದೇಶವ ರಕ್ಷಿಸೋಣ ........

Monday, November 22, 2010

ಇನಿಯ.........

ಅದೇಕೋ ಇಂದು ನನ್ನಿನಿಯ
ತುಂಬಾ ಖುಷಿಯಾಗಿದ್ದ
ಕಾರಣ ಕೇಳಿದರೆ,ಅದನ್ನ
ಬಿಡು ಹತ್ತಿರ ಬಾ ಎಂದಿದ್ದ ....

                                      ಎಂದೂ ಇಲ್ಲದ ಪ್ರೀತಿ
                                       ಇಂದೇಕೆ ಎಂದು ಆಶ್ಚರ್ಯವಾಗಿತ್ತು
                                      ಎಲ್ಲಾ ಚಿಂತೆಯನ್ನು ಬಿಟ್ಟು
                                     ಅವನ  ಅಪ್ಪುಗೆಯಲ್ಲಿ ಕರಗುವಂತಾಗಿತ್ತು ....


ನನ್ನವನ ತುಟಿಯಂಚಿನಿಂದ
ಬಂದ ಮುತ್ತು ಕೆನ್ನೆ ಸೇರಿತ್ತು
ನಾ ತಿರುಗುವ ಮೊದಲೇ ಅವನ
ಕೆನ್ನೆ ನನ್ನ ತುಟಿಯ ಹತ್ತಿರ ಇತ್ತು ....

Friday, October 8, 2010

ಸೂರ್ಯದೇವನ ಕಣ್ಣಾಮುಚ್ಚಾಲೆ ....


ಬಾನಂಗಳದಲ್ಲಿ ಮೂಡುತ್ತಿರುವ
ಹೇ  ಸೂರ್ಯದೇವನೇ
ನಿನ್ನ ಕಿರಣಗಳಿಂದ ನಾ
ಕಣ್ಣು ತೆರೆಯದಾದೆ ........
                              

                              ಉದಯ ಕಾಲದ ಕೆಂಪು ವರ್ಣವ
                              ಕಾಣದವರು ಯಾರು ಇಲ್ಲ
                              ನೋಡು -ನೋಡುತ್ತಿದ್ದಂತೆ
                              ನಭದ ಮೇಲೆರುವೆಯಲ್ಲ ......


ಹೊತ್ತು ಏರುವ ಹಾಗೆ ಎಲ್ಲರ
ನೆತ್ತಿಯ  ಸುಡುವೆಯಲ್ಲ
ತಂಪ ಪಡೆಯಲು ನೆರಳಿಗೆ
ಅತ್ತ-ಇತ್ತ ಸಾಗುವರೆಲ್ಲ .......
.
                             
                              ಮುಸ್ಸಂಜೆಯ  ಹೊತ್ತಿನಲ್ಲಿ
                              ನೀ ಮುಳುಗುವುದ ನೋಡಲು
                              ಸಾಗರದೆಡೆಗೆ ಜನರು ಸಾಗುವರು
                              ಆ ನಿನ್ನ ಸೌಂದರ್ಯವ ನೋಡಿ ಸಂತೋಷಿಸುವರು........


ದಿನವೂ ಪೂರ್ವದಲ್ಲೊಮ್ಮೆ ಹುಟ್ಟಿ
ಪಶ್ಚಿಮದಲ್ಲಿ ನೀ ಮುಳುಗುವೆ
ಎಂತಹದು ಈ ನಿನ್ನ ಪರಿಯು
ನಿನಗಿದೋ ಸಮಸ್ತ ಜನತೆಯ ಪ್ರಣಾಮಗಳು .........

                                                                      

Thursday, September 23, 2010

ಕಾಡಗರ್ಭದೊಳಗೊಮ್ಮೆ ...........

ಕಾಡಕಡಿಯ ಬೇಡ ಓ ಮನುಜ
ಕಡಿದರೆ ಮುಗಿಯಿತು ನಿನ್ನ ಜನುಮ
ಕಾಡಿದ್ದರೆ ಎಲ್ಲೆಲ್ಲಿಯೂ ಹಸಿರು
ಅದರಲ್ಲಿಯೇ ಇಹುದು ಎಲ್ಲರ ಉಸಿರು ....

ನಮ್ಮಂತೆಯೇ ಅಲ್ಲವೇ
ಅವುಗಳೂ ಕೂಡ,ಜೀವವಿದೆ
ಜೀವನವಿದೆ-ಸಹಬಾಳ್ವೆ ಇದೆ
ಏನೆಲ್ಲ ಇದೆ ಆ ಕಾಡ ಗರ್ಭದೊಳಗೆ !!!!!!!!!!

ಕಾಡಿದ್ದರೆ ತಾನೇ ಹಸಿರು -ಉಸಿರು ಎಲ್ಲ
ಹಕ್ಕಿಗಳ ಚಿಲಿಪಿಲಿ ನಿನಾದವೆಲ್ಲ
ವರುಷ ವರುಷವೂ ಬೇಕು ಮಳೆ ..
ಮಳೆಯಿಂದ ಬೆಳೆ,ಅದರಿಂದಲೇ ಜೀವನ ....

ಭೂಮಿಗೆ ತಂಪೆರೆಯಲು ಬೇಕು
ಕಾಡು ,ಅದುವೇ ತಂಪಿನ ಬೀಡು
ಕಾಡನ್ನು ಕಡಿದರೆ ಆಗುವುದು
ನಮ್ಮಯ ಭೂಮಿಯು ಬರಡು.............

Tuesday, August 24, 2010

ಬಾಳಿನ ಬಂಡಿ

ಬದುಕೆಂಬ ಈ ಬೆಂಗಾಡಿನಲಿ
ನಾವು ನೀವು ಇನ್ನೆಷ್ಟು ದಿನ .......


                                 ಇಂದು ಇರುವವರು ನಾಳೆ ಇಲ್ಲ
                                  ಎಲ್ಲರೂ ಒಂದು ದಿನ ಹೋಗಲೇ ಬೇಕಲ್ಲ
                                  ಇರುವ ನಾಲ್ಕು ದಿನಗಳ ಈ ಬಾಳಲ್ಲಿ
                                   ಸುಖ ದುಃಖಗಳೇ ಮುಖ್ಯ


ಹೋದ ಮೇಲೆ ಕಣ್ಣೀರೇಕೆ............?
ಇದ್ದ ದಿನಗಳ ನೆನೆಯಬೇಕು
ಜೀವನವೆಂಬ ಸಾಗರದಲ್ಲಿ
ಈಜ ಬೇಕು ..ಇದ್ದು ಜಯಿಸಬೇಕು

                                            
                                   ಮುಂದಿನ ದಿನಗಳಲ್ಲಿ ಈ
                                   ಬಾಳೆಂಬ ರಥವನ್ನು ಎಳೆಯುವರಾರು......?
                                   ಸಾಕು ಮಾಡಯ್ಯ ಹೇ ದೇವನೇ
                                   ನೀನು ಆಡಿಸುವ ಆಟವ......          

Tuesday, August 3, 2010

ಮಳೆರಾಯನೊಂದಿಗೆ

ಜಿನುಗುತಿರುವ ಮಳೆಹನಿಯಲ್ಲಿ
ನೀ ಬರುವುದು ಕಂಡೆ
ನೀನು ನೆನೆಯುವೆ ಎಂದು
ಛತ್ರಿಯ ಹಿಡಿದುಕೊಂಡೆ.

ಆ ಮಳೆಹನಿಯೊಂದಿಗೆ ಕಳುಹಿಸಿದೆ
ನನ್ನ ಪ್ರೀತಿಯ ಸಿಹಿ ಮುತ್ತೊಂದನ್ನು
ಅದು ಸಿಕ್ಕ ನಂತರ ನೀ
ಕೇಳಿದೆ ಕೊಡು ಮತ್ತೊಂದು ಮುತ್ತೊಂದನ್ನು.