Thursday, December 30, 2010

ಜಗ ಹೊತ್ತಿ ಉರಿದೊಡೆ......

ಧಗ ಧಗನೆ ಹೊತ್ತಿ ಉರಿಯುವ
ಈ ನಾಡಿನಲ್ಲಿ ,ಆ ಬೆಂಕಿಯ
ಆರಿಸುವವರು ಯಾರಿಹರು ಇಲ್ಲಿ......

ಒಂದೆಡೆ ಭಯೋತ್ಪಾದನೆ ..
ಇನ್ನೊಂದೆಡೆ ರಾಜಕೀಯ ..
ಇವೆರಡರ ನಡುವೆ ಇರುವ
ನಮ್ಮ ದೇಶವ ರಕ್ಷಿಸುವರ್ಯಾರು ........

ಕೊಲೆ-ಸುಲಿಗೆ-ವಂಚನೆ
ಅತ್ಯಾಚಾರ-ಅನಾಚಾರ
ಇವೆಲ್ಲದರ ನಡುವೆ ಇರುವ
ಜನರಿಗೆ ಸ್ಥಾನವೆಲ್ಲಿದೆ ......?

ಜನತೆಯಂತೆ ಕಾಡು ಪ್ರಾಣಿಗಳಿಗೂ
ಸಹ ಜಾಗವಿಲ್ಲದಂತಾಗಿದೆ
ಇಡೀ ಜಗವೇ ದುಷ್ಟರಿಂದ ಕೂಡಿದೆ
ಇದರ ರಕ್ಷಣೆ ಯಾರದ್ದಾಗಿದೆ .......?

ಗ್ರಾಮ- ಗ್ರಾಮವೇ ಹೊತ್ತಿ ಉರಿದರೂ
ಅದರ ಗೊಡವೆಯೇ ಬೇಡ ಎಂದು
ಸುಮ್ಮನೆ ಇರುವ ಜನಗಳೇ,ಏಳಿ
ಎದ್ದೇಳಿ ನಮ್ಮ ದೇಶವ ರಕ್ಷಿಸೋಣ ........

3 comments:

  1. ಎಷ್ಟು ಏಳಿ ಎಂದರೂ ನಿದ್ದೆಯಿಂದ ಯಾರೂ ಏಳಲಾರರು.
    ನಾವೇ ಪ್ರಯತ್ನಿಸಬೇಕು ಅಷ್ಟೆ.
    ಕವನ ಚನ್ನಾಗಿದೆ

    ReplyDelete
  2. ಗ್ರಾಮ- ಗ್ರಾಮವೇ ಹೊತ್ತಿ ಉರಿದರೂ
    ಅದರ ಗೊಡವೆಯೇ ಬೇಡ ಎಂದು
    ಸುಮ್ಮನೆ ಇರುವ ಜನಗಳೇ.....
    nijavaagaluu satyave... avara mane benki innu namma mane tanka baaralilla antha hoddu malaguva janare jaasti...

    ReplyDelete
  3. hawdu Chandrikaravare.....nimma matu nijavagalu satya..

    ReplyDelete