Thursday, September 23, 2010

ಕಾಡಗರ್ಭದೊಳಗೊಮ್ಮೆ ...........

ಕಾಡಕಡಿಯ ಬೇಡ ಓ ಮನುಜ
ಕಡಿದರೆ ಮುಗಿಯಿತು ನಿನ್ನ ಜನುಮ
ಕಾಡಿದ್ದರೆ ಎಲ್ಲೆಲ್ಲಿಯೂ ಹಸಿರು
ಅದರಲ್ಲಿಯೇ ಇಹುದು ಎಲ್ಲರ ಉಸಿರು ....

ನಮ್ಮಂತೆಯೇ ಅಲ್ಲವೇ
ಅವುಗಳೂ ಕೂಡ,ಜೀವವಿದೆ
ಜೀವನವಿದೆ-ಸಹಬಾಳ್ವೆ ಇದೆ
ಏನೆಲ್ಲ ಇದೆ ಆ ಕಾಡ ಗರ್ಭದೊಳಗೆ !!!!!!!!!!

ಕಾಡಿದ್ದರೆ ತಾನೇ ಹಸಿರು -ಉಸಿರು ಎಲ್ಲ
ಹಕ್ಕಿಗಳ ಚಿಲಿಪಿಲಿ ನಿನಾದವೆಲ್ಲ
ವರುಷ ವರುಷವೂ ಬೇಕು ಮಳೆ ..
ಮಳೆಯಿಂದ ಬೆಳೆ,ಅದರಿಂದಲೇ ಜೀವನ ....

ಭೂಮಿಗೆ ತಂಪೆರೆಯಲು ಬೇಕು
ಕಾಡು ,ಅದುವೇ ತಂಪಿನ ಬೀಡು
ಕಾಡನ್ನು ಕಡಿದರೆ ಆಗುವುದು
ನಮ್ಮಯ ಭೂಮಿಯು ಬರಡು.............

4 comments:

  1. ನಮ್ಮಂತೆಯೇ ಅಲ್ಲವೇ
    ಅವುಗಳೂ ಕೂಡ,ಜೀವವಿದೆ
    ಜೀವನವಿದೆ-ಸಹಬಾಳ್ವೆ ಇದೆ
    ಏನೆಲ್ಲ ಇದೆ ಆ ಕಾಡ ಗರ್ಭದೊಳಗೆ !!!!!!!!!!

    ಕಾಡಿದ್ದರೆ ತಾನೇ ಹಸಿರು -ಉಸಿರು ಎಲ್ಲ
    ಹಕ್ಕಿಗಳ ಚಿಲಿಪಿಲಿ ನಿನಾದವೆಲ್ಲ Nice one Rashmi keep writing

    ReplyDelete
  2. ರಶ್ಮಿ ಮೇಡಮ್,
    ಪರಿಸರ ಪ್ರೇಮವನ್ನು ಸಾರುವ ಕವನಕ್ಕೆ ಅಭಿನಂದನೆ....ತುಂಬಾ ಚೆನ್ನಾಗಿದೆ.....

    ReplyDelete
  3. ರಶ್ಮಿಯವರೆ,

    ಕವನ ತುಂಬಾ ಚನ್ನಾಗಿದೆ, ಅರ್ಥಗರ್ಭಿತವಾಗಿದೆ.ಕಾಡು ನಾಶ ಮಾಡುವವರಿಗೊಂದು ಸಂದೇಶ, ನಿಮ್ಮ ಪರಿಸರ ಕಾಳಜಿಗೆ ಅಭಿನಂದನೆ.

    ReplyDelete